ಚಿಕ್ಕಮಗಳೂರು : ಪೊಲೀಸರ ಜೀಪನ್ನೇ ಕಳ್ಳನೋರ್ವ ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಹನುಮಂತಪ್ಪ ವೃತ್ತದ ಪೆಟ್ರೋಲ್ ಬಂಕ್ ಬಳಿ ಬಸವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಠಾಣೆಯ ಜೀಪ್ ನಿಲ್ಲಿಸಿ ಮೆಡಿಕಲ್ ಶಾಪ್ಗೆ ಹೋಗಿ ಬರುವಷ್ಠರಲ್ಲಿ ನಿಂತಿದ್ದ ಜಾಗದಲ್ಲಿ ಜೀಪೇ ಇರಲಿಲ್ಲ. ಪೊಲೀಸರು ಗಾಡಿ ತಂದು ನಿಲ್ಲಿಸುತ್ತಿದ್ದದ್ದನ್ನ ಕಂಡು ಕಳ್ಳ ಸಿಬ್ಬಂದಿ ಆ ಕಡೆ ಹೋಗುತ್ತಿದ್ದಂತೆ ಈತ ಜೀಪನ್ನೇ ಕದ್ದು ಕಡೂರು ರಸ್ತೆಯ ಮಾರ್ಗವಾಗಿ ಹೋಗಿದ್ದು, ಕೂಡಲೇ ಪೊಲೀಸರು ಆತನನ್ನ ಹಿಂಬಾಲಿಸಿದ್ದಾರೆ. ನಗರದಿಂದ ಸುಮಾರು ಐದು ಕಿ.ಮೀ. ದೂರ ಹೋದ ಮೇಲೆ ಲಕ್ಯಾ ಕ್ರಾಸ್ ಬಳಿ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದು ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಗಾಡಿಯನ್ನ ಡಿಕ್ಕಿ ಹೊಡೆದು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಹೋಗಿದ್ದು, ಪೊಲೀಸರ ಜೀಪನ್ನೇ ಕದಿಯುವಂತ ಧೈರ್ಯವಂತನಿಗಾಗಿ ಗ್ರಾಮಾಂತರ ಪೊಲೀಸರು ಕಾಡಿನೊಳಗೆ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.









