ಚಿಕ್ಕಮಗಳೂರು : ಬೆಡ್ ರೂಮಿನಲ್ಲಿ ತಲೆ ದಿಂಬಿನಡಿ ಇದ್ದ ಗೋಧಿ ನಾಗರಹಾವಿನ ಮರಿ ಸೆರೆ…

754

ಚಿಕ್ಕಮಗಳೂರು : ಬೆಡ್ ರೂಮಿನಲ್ಲಿ ತಲೆ ದಿಂಬಿನಡಿ ಇದ್ದ ಗೋಧಿ ನಾಗರಹಾವಿನ ಮರಿಯನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ಶೃಂಗೇರಿಯ ರಾಜ ನಗರದ ನಾಗರಾಜ್ ಆಚಾರ್ ಎಂಬುವವರ ಮನೆಯಲ್ಲಿ ಈ ಹಾವನ್ನು ಸೆರೆ ಹಿಡಿಯಲಾಗಿದೆ. ಆದರೆ ಸೆರೆ ಹಿಡಿದ ಮರಿ ಗೋಧಿ ನಾಗರಹಾವನ್ನು ಆಚೆ ತಂದಾಗ ಪುಟ್ಟ ಹಾವು ಎಡೆ ಬಿಚ್ಚಿರುವುದನ್ನು ನೋಡುವುದಕ್ಕೆ ಮಾತ್ರ ಮನೋಜ್ಞವಾಗಿದೆ. ಮನೆ ಮಾಲೀಕ ರೂಂಗೆ ಹೋದಾಗ ಬೆಡ್ ಮೇಲಿದ್ದ ತಲೆದಿಂಬಿನ ಕೆಳಗೆ ಹಾವು ಇರುವುದನ್ನು ನೋಡಿದ್ದಾರೆ. ಆದರೆ ಹಾವಿನ ಗಾತ್ರದ ಬಗ್ಗೆ ಅರಿವಾಗಿಲ್ಲ. ಹೊರಗೆ ಬಂದು ಮನೆಯಲ್ಲಿ ಯಾರಿಗೂ ಹೇಳದೆ ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್ ನೋಡ ನೋಡುತ್ತಿದ್ದಂತೆ ನೀರು ಕುಡಿದಂತೆ ಹಾವಿನ ಮರಿಯನ್ನು ಸೆರೆ ಹಿಡಿದು ಆಚೆ ತಂದಿದ್ದಾರೆ. ಮನೆಯಿಂದ ಹೊರ ತಂದ ಹಾವನ್ನು ಬೆಕ್ಕಿನ ಮರಿಯಂತೆ ಆಟವಾಡಿಸಿದ್ದಾರೆ. ಚಿಕ್ಕ ನಾಗರಹಾವಿನ ಮರಿ ಎಡೆ ಬಿಚ್ಚಿರುವ ದೃಶ್ಯ ನೋಡುವುದಕ್ಕೆ ಮಾತ್ರ ಅದ್ಭುತವಾಗಿದೆ. ಮನೆ ಮುಂದೆ ಹಾವಿನ ಮರಿಯನ್ನು ಸ್ವಲ್ಪ ಹೊತ್ತು ಆಟವಾಡಿಸಿದ ಸ್ನೇಕ್ ಅರ್ಜುನ್ ಅವರು ಬಳಿಕ ಅದನ್ನು ಶೃಂಗೇರಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.