ಚಿಕ್ಕಮಗಳೂರು : ಮೂರು ಕರುಗಳಿಗೆ ಜನ್ಮ ನೀಡಿದ ಹಸು…

930
firstsuddi

ಚಿಕ್ಕಮಗಳೂರು : ಹಸು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ. ರಂಗಪ್ಪ ಎಂಬುವವರಿಗೆ ಸೇರಿದ ದೇಸಿ ತಳಿಯ ಹಸು ಎರಡು ಗಂಡು, ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಹಸುಗಳು ಸಾಮಾನ್ಯವಾಗಿ ಒಂದೇ ಕರು ಹಾಕುತ್ತದೆ. ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಆದರೆ ಮೂರು ಕರುವಿಗೆ ಜನ್ಮ ನೀಡುವುದು ತುಂಬಾ ವಿರಳ. ದೇಸಿಯ ತಳಿಯ ಹಸುವಿಗೆ ಲಕ್ಷ್ಮಿ ಎಂಬ ಹೆಸರಿಟ್ಟಿದ್ದ ರಂಗಪ್ಪ ಅವರು ಹಸು ಹಾಗೂ ಕರುಗಳಿಗೆ ಪೂಜೆ ಮಾಡಿ ಮೂರು ಕರುಗಳಿಗೆ ರಾಮ, ಲಕ್ಷ್ಮಣ ಹಾಗೂ ಸೀತೆ ಎಂಬ ಹೆಸರನ್ನು ಇಟ್ಟಿದ್ದಾರೆ. ಹಸು ಮೂರು ಕರು ಹಾಕಿದ ಹಿನ್ನೆಲೆ, ರಂಗಪ್ಪ ಅವರು ಮನೆಗೆ ಲಕ್ಷ್ಮಿ ಬಂದಂತೆ ಭಾವಿಸಿದ್ದು, ಹಸು ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನು ನೋಡಿ ಹೋಗುತ್ತಿದ್ದಾರೆ.