ಚಿಕ್ಕಮಗಳೂರು : ಲಾಡ್ಜ್ ಗೆ ನುಗ್ಗಿದ ಜೀಪ್ , ಸಿಸಿ ಟಿವಿಯಲ್ಲಿ ಸೆರೆಯಾದ ಭಯಾನಕ ದ್ರಶ್ಯ…

813

ಚಿಕ್ಕಮಗಳೂರು : ಲಾಡ್ಜ್ ಒಳಗೆ ಜೀಪ್ ನುಗ್ಗಿರುವ ಘಟನೆ ನಗರದ ಐ ಜಿ ರಸ್ತೆಯಲ್ಲಿ ನಡೆದಿದೆ. ಕಡೂರು ಕಡೆಯಿಂದ ಬಂದ ಜೀಪ್ ಏಕಾಏಕಿ ಐ ಜಿ ರಸ್ತೆಯ ದಿ ಲೋಟಸ್ ಲಾಡ್ಜ್ ಒಳಗೆ ನುಗ್ಗಿದ್ದು, ಲಾಡ್ಜ್ ರಿಸಪ್ಷನಿಸ್ಟ್ ಬಳಿ ಮಲಗಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಜೀಪ್ ನುಗ್ಗಿದ ರಭಸಕ್ಕೆ ಮಲಗಿದ್ದವರು ಅತ್ತ ಇತ್ತ ಓಡಿದ್ದಾರೆ ಎನ್ನಲಾಗಿದ್ದು, ಜೀಪ್ ನುಗ್ಗಿದ ರಭಸಕ್ಕೆ ಲಾಡ್ಜ್ ನ ಮುಂಭಾಗದ ಗ್ಲಾಸ್ ಹಾಗೂ ಪೀಠೋಪಕರಣಗಳು ಪುಡಿ ಪುಡಿಯಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.