ಚಿಕ್ಕಮಗಳೂರು : ವಿದೇಶದಿಂದ ವಾಪಸ್ಸಾಗಿ ಸಾವನ್ನಪ್ಪಿದ್ದ ಮಹಿಳೆಗೆ ಕೊರೊನಾ ಸೋಂಕು ನೆಗೆಟಿವ್ ಎಂದು ವರದಿ…

455
firstsuddi

ಚಿಕ್ಕಮಗಳೂರು : ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಜಿಲ್ಲೆಗೆ ವಿದೇಶದಿಂದ ವಾಪಸ್ಸಾಗಿದ್ದ ವೃದ್ಧೆಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಗೆ ಕೊರೊನಾ ಸೋಂಕು ಇರಲಿಲ್ಲ ಎಂದು ನೆಗೆಟಿವ್ ವರದಿ ಬಂದಿದ್ದು, ಕಾಫಿನಾಡಿಗರು ಮತ್ತೊಮ್ಮೆ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಆಸ್ಟ್ರೇಲಿಯಾದಿಂದ ವಾಪಸ್ಸಾಗಿದ್ದ 65 ವರ್ಷದ ವೃದ್ಧೆ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ವೃದ್ಧೆಯ ಸಾವಿನಿಂದ ಸ್ಥಳೀಯರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆತಂಕಕ್ಕೀಡಾಗಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮೃತ ವೃದ್ಧೆಯ ಗಂಟಲು ದ್ರವವನ್ನು ಹಾಸನದ ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಕುರಿತು ಇಂದು ವರದಿ ಬಂದಿದ್ದು, ಮೃತ ವೃದ್ಧೆಗೆ ಕೊರೊನಾ ಸೋಂಕು ಇರಲಿಲ್ಲ ಎಂದು ತಿಳಿದು ಬಂದಿದೆ.