ಚಿಕ್ಕಮಗಳೂರು :ಶಿಥಿಲಾವಸ್ಥೆಯಾಗಿ ಕುಸಿದು ಬಿದ್ದ ಮನೆಗಳು…

286

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ನೋಡು ನೋಡುತ್ತಿದ್ದಂತೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದ್ದು, ಭಾರಿ ಮಳೆಯಿಂದ ಮುಳುಗಡೆಯಾಗಿದ್ದ ಮನೆಗಳು ಶಿಥಿಲಾವಸ್ಥೆಯಾಗಿ ಕುಸಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಮಳೆಯ ಅವಾಂತರದಿಂದ ಬಾಳೆಹೊನ್ನೂರಿನಲ್ಲಿ 112 ಮನೆಗಳು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು ಹಾಗೂ ಕಳಸ ಹೋಬಳಿಯಲ್ಲಿ 123 ಮನೆಗಳು ನೆಲಸಮವಾಗಿದೆ.