ಚಿಕ್ಕಮಗಳೂರು : ಪಾಸ್ಪೋರ್ಟ್ ವೆರಿಫಿಕೇಶನ್ಗಾಗಿ ತಂದೆಯ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಯುವತಿ ಸಿಂಧುಜ ಬೈಕ್ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವ ಸಿ.ಟಿ. ರವಿ ಅವರ ವಿರುದ್ಧ ಧನಿ ಎತ್ತಿ ಮಹಿಳೆಯೊಬ್ಬರು ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ಸಚಿವ ಸಿ.ಟಿ. ರವಿ ಅವರು ಮಾಡಿದ್ದ ಟ್ವೀಟ್ಗೆ ಪ್ರತಿಕ್ರಯಿಸಿದ್ದು, ನಿಮಗೆ ಜೀವದ ಬೆಲೆ ಗೊತ್ತಿದೆಯಾ? ಎಂದು ಪ್ರಶ್ನಿಸಿದ್ದು, ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈ ರೀತಿಯ ದುರಾದೃಷ್ಟಕರ ಘಟನೆ ನಡೆಯುತ್ತಿರಲಿಲ್ಲ. ಚಿಕ್ಕಮಗಳೂರಿನ ರಸ್ತೆ ಹೇಗಿದೆ ಎಂದು ನಿಮ್ಮ ಕ್ಷೇತ್ರವನ್ನು ಒಂದು ರೌಂಡ್ ಸುತ್ತಿಕೊಂಡು ಬನ್ನಿ. ಬಳಿಕ ನೀವು ಸಂತಾಪ ಸೂಚಿಸಬೇಕಾ ಇಲ್ವಾ. ಅದಕ್ಕೆ ನೀವು ಅರ್ಹರಿದ್ದೀರ ಇಲ್ವಾ ಎಂದು ಯೋಚನೆ ಮಾಡಿ ಟ್ವೀಟ್ ಮಾಡಿ. ಇದು ಬಹಳ ಬೇಜವಾಬ್ದಾರಿಯುತವಾದ ಟ್ವೀಟ್ ಆಗಿದೆ. ಇದನ್ನು ನಾವು ಖಂಡಿತವಾಗಿಯೂ ಖಂಡಿಸುತ್ತೇವೆ. ಇದು ದುರಾದೃಷ್ಟಕರವಾಗಿ ಆದ ಅಪಘಾತವಲ್ಲ. ಇದು ನಿಮ್ಮ ಬೇಜವಾಬ್ದಾರಿತನದಿಂದ ಆಗಿರುವಂತಹ ಅಪಘಾತ ಎಂದು ಕಿಡಿಕಾರಿದ್ದಾರೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಚಿವ ಸಿ.ಟಿ ರವಿ ಅವರ ವಿರುದ್ಧ ದ್ವನಿಯೆತ್ತಿ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೋ ವೈರಲ್…









