ಚಿಕ್ಕಮಗಳೂರು : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ-ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆಗಳನ್ನು ಕೈಬಿಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಷ್ಟ್ರಪತಿಗೆ ಮನವಿ ಮಾಡಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಶುಕ್ರವಾರ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಈ ಮೂರೂ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿವೆ, ಸಿಎಎ ಕಾಯ್ದೆ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತದೆ, ರಾಷ್ಟ್ರದ ನಾಗರೀಕರನ್ನು ಹಿಂದೂ-ಮುಸ್ಲಿಂ ಎಂದು ಒಡೆಯುತ್ತದೆ ಎಂದು ದೂರಿದರು.
ಎನ್ಆರ್ಸಿ ಕಾಯ್ದೆ ನೂರಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಅನ್ಯ ಧರ್ಮೀಯರ ಪೌರತ್ಯವನ್ನು ಪ್ರಶ್ನಿಸುತ್ತದೆ, ಈ ಕಾಯ್ದೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ವಿಭಜಿಸುತ್ತದೆ ಎಂದು ಆರೋಪಿಸಿದರು.
ಎನ್ಪಿಆರ್ ಕಾಯ್ದೆ ಸಹ ಅಣ್ಣ ತಮ್ಮಂದಿರಂತೆ ಬಾಳುತ್ತಿರುವವರನ್ನು ಒಡೆಯುತ್ತದೆ ಎಂದ ಅವರು ಹಾಗಾಗಿ ಈ ಮೂರೂ ಕರಾಳ ಕಾಯ್ದೆಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕ ಎಸ್.ಎನ್.ಮಹೇಂದ್ರ ಸ್ವಾಮಿ, ಖಜಾಂಚಿ ಆರ್.ಶೇಖರ್, ತಾಲ್ಲೂಕು ಸಂಚಾಲಕ ರಮೇಶ್ ಉದ್ದೇಬೋರನಹಳ್ಳಿ, ಜಿಲ್ಲಾ ಸಂಚಾಲಕರಾದ ಗಂಗರಾಜು, ಕಂಡಪ್ಪ, ಡಿ.ರಾಮು, ಪದಾಧಿಕಾರಿಗಳಾದ ಸುರೇಶ್, ಮಹೇಶ್, ಹೇಮಂತ್, ಪ್ರಕಾಶ್, ಆನಂದ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಿಎಎ-ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆಗಳನ್ನು ಕೈಬಿಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಷ್ಟ್ರಪತಿಗೆ...










