ಚಿಕ್ಕಮಗಳೂರು : ಸ್ಪರ್ಶ ಆಸ್ಪತ್ರೆಯಲ್ಲಿ ಉಚಿತ ಮೂಳೆ ಮತ್ತು ಕೀಲು ತಪಾಸಣಾ ಶಿಬಿರ…

84
firstsuddi

ಚಿಕ್ಕಮಗಳೂರು : ನಗರದ ರತ್ನಗಿರಿ ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ ಉಚಿತ ಮೂಳೆ ಮತ್ತು ಕೀಲು ತಪಾಸಣಾ ಶಿಬಿರ ಇಂದು ನಡೆಯಿತು.

ಫಂಕ್ಷನಲ್ ಮೆಡಿಸಿನ್ ಕೇಂದ್ರದ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡು ರೋಗಿಗಳಿಗೆ ಚಿಕಿತ್ಸೆ, ಸಲಹೆ, ಮಾರ್ಗದರ್ಶನ ನೀಡಿತು.
ಫಂಕ್ಷನಲ್ ಮೆಡಿಸಿನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಸೂಕ್ಷ್ಮಾಣು ಜೀವಿಗಳ ಸಮತೋಲನದ ನಿರ್ವಹಣೆಗೆ ಕ್ರಿಯಾತ್ಮಕ ಚಿಕಿತ್ಸಾ ಪದ್ಧತಿ ಅತ್ಯಂತ ಸಹಕಾರಿಯಾಗಿದೆ ಎಂದರು.

ಜಗತ್ತಿನಾದ್ಯಂತ ಮನ್ನಣೆ ಪಡೆದಿರುವ ಕ್ರಿಯಾತ್ಮಕ ಚಿಕಿತ್ಸಾ ಪದ್ಧತಿಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ದೀರ್ಘಕಾಲದ ಕಾಯಿಲೆಗಳನ್ನು ಮೂಲದಿಂದಲೇ ಗುಣಪಡಿಸಬಹುದು ಎಂದು ತಿಳಿಸಿದರು.

ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕರು ಆಗಾಗ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗುಫಿಕ್ ಕಂಪನಿಯ ವ್ಯವಸ್ಥಾಪಕ ದಿವಾಕರ್, ಡಾ.ಆದ್ರ್ರಾ ಮ್ಯಾಥಿವ್ ಶಿಬಿರದಲ್ಲಿ ಪಾಲ್ಗೊಂಡಿದ್ದರು.