ಚಿತ್ರದುರ್ಗ: ಹಿರಿಯೂರು ಪಟ್ಟಣ ಬಳಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ…

52
firstsuddi

ಚಿತ್ರದುರ್ಗ: ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣ ಬಳಿ ನಡೆದಿದೆ.

ಹೊಳಲ್ಕೆಯ ಅರುಣ್ ಕುಮಾರ್(29) ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಅರುಣ್, ಇಂದು ರಾಜಹಂಸ ಬಸ್ ನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ತೆರಳುತ್ತಿದ್ದರು. ಆದ್ರೆ, ಹಿರಿಯೂರು ಬಳಿ ಖಾಸಗಿ ಡಾಬಾ ಬಳಿ ಬಸ್ ನಿಂತಾಗ ವಾಶ್ ರೂಮ್ ಗೆ ಹೋಗಿ ಬಸ್ ಏರಲು ಬರುವಾಗ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ. ಅರುಣ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅರುಣ್ ಕುಮಾರ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದರು. ಆದ್ರೆ, ಯುವತಿ ಕಡೆಯವರಿಂದ ಪ್ರೇಮಕ್ಕೆ ವಿರೋಧವಿದ್ದು, ಪ್ರೀತಿಸಿದ ಯುವತಿ ಕಡೆಯವರಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ ಅರುಣ್, ಈ ಮೊದಲು ಕರೆ ಮಾಡಿ ಬೆದರಿಕೆ ಒಡ್ಡಿದ್ದರು, ಅಪಾಯವಿದೆ ಎಂದು ಹೇಳಿದ್ದರು. ಬಳಿಕ 2 ದಿನದಿಂದ ಫಾಲೋ ಮಾಡಿದ್ದಾರೆ ಎಂದರು.

ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.