ಚುನಾವಣೆ ಬಂದಾಗಲೆಲ್ಲಾ ಕುಮಾರಸ್ವಾಮಿಗೆ ಹೃದಯದ ಸಮಸ್ಯೆ ಎದುರಾಗೋದು, ಆಸ್ಪತ್ರೆಗೆ ದಾಖಲಾಗೋದು ಮಾಮೂಲಾಗಿದೆ: ರಮೇಶ್ ವ್ಯಂಗ್ಯ…

21
firstsuddi

ಮಳವಳ್ಳಿ: ಚುನಾವಣೆ ಬಂದಾಗಲೆಲ್ಲಾ ಕುಮಾರಸ್ವಾಮಿಗೆ ಹೃದಯದ ಸಮಸ್ಯೆ ಎದುರಾಗೋದು, ಆಸ್ಪತ್ರೆಗೆ ದಾಖಲಾಗೋದು ಮಾಮೂಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಮೂರೇ ದಿನಕ್ಕೆ ರಾಜ್ಯ ಸುತ್ತಾಡುತ್ತಿದ್ದಾರೆ. ಅದು ಹೇಗೆ ಅಂತ ಮಾತ್ರ ಅರ್ಥವಾಗುತ್ತಿಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಚುನಾವಣೆ ಇಲ್ಲದ ಸಮಯದಲ್ಲಿ ಸಹಜವಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೃದಯದ ಸಮಸ್ಯೆ ಎನ್ನುತ್ತಾರೆ. ಆಸ್ಪತ್ರೆಗೂ ದಾಖಲಾಗುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಎರಡೇ ದಿನಕ್ಕೆ ಮನೆಗೆ ಬಂದು ಮರುದಿನದಿಂದಲೇ ಎಲ್ಲೆಡೆ ಸುತ್ತಾಡುತ್ತಿರುತ್ತಾರೆ. ಈ ಪವಾಡ ನಮಗೆ ತಿಳಿಯುತ್ತಿಲ್ಲ ಎಂದರು.

ನಮ್ಮ ಚಲುವರಾಯಸ್ವಾಮಿ ಅವರಿಗೂ ಅದೇ ರೀತಿ ಹೃದಯದ ಸಮಸ್ಯೆ ಇದೆ. ಇವರು ಆಸ್ಪತ್ರೆ ಸೇರಿದರೆ ತಿಂಗಳಾನುಗಟ್ಟಲೆ ಹೊರಗೆ ಬರೋದೇ ಇಲ್ಲ. ಆದರೆ, ಕುಮಾರಸ್ವಾಮಿ ಅವರು ಆಪರೇಷನ್ ಆದ ಎರಡೇ ದಿನಕ್ಕೆ ಹೊರಗೆ ಬರುತ್ತಾರೆ. ಈ ಹೊಸ ಟೆಕ್ನಿಕ್ ಹೇಗೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದರು.

ಇನ್ನು, ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರಿಗೆ ನೇರವಾಗಿ ನನ್ನ ಮುಂದೆ ಬಂದು ಮಾತಾಡೋಕೆ ಹೇಳಲಿ ಹೇಳ್ತೀನಿ. ನನ್ನ ಆರೋಗ್ಯದ ಬಗ್ಗೆ ಮಾತಾಡಿ ಅವರು ಖುಷಿ ಪಡಲಿ ಬಿಡಿ. ಇದಕ್ಕೆ ಜನರು ಇದ್ದಾರೆ, ಅವರೇ ಕಾಂಗ್ರೆಸ್‌ನವರಿಗೆ ಉತ್ತರ ಕೊಡ್ತಾರೆ ಎಂದರು.