ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ-ಐಪಿಎಲ್ ಪಂದ್ಯದಿಂದ ಹೊರಬಂದ ಅನುಭವಿ ಆಟಗಾರ ಸುರೇಶ್ ರೈನಾ…

201
firstsuddi

ಅಬುಧಾಬಿ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಅವರು ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ವಿಶ್ವನಾಥನ್ ಅವರು, ಸುರೇಶ್ ರೈನಾ ತಮ್ಮ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಸ್ ತೆರಳುತ್ತಿದ್ದಾರೆ. ಮುಂದೆ ಆರಂಭವಾಗುವ ಐಪಿಎಲ್ ಪಂದ್ಯಗಳಲ್ಲಿ ಸುರೇಶ್ ರೈನಾ ಅವರು ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುರೇಶ್ ರೈನಾ ಹಾಗೂ ಅವರ ಕುಟುಂಬಕ್ಕೆ ಬೆಂಬಲವನ್ನು ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ದೀಪಕ್ ಚಹರ್ ಹಾಗೂ ತಂಡ 10 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಖು ತಗುಲಿರುವುದರ ಬಗ್ಗೆ ವರದಿಯಾಗಿತ್ತು. ಇದರಿಂದ ನಿನ್ನೆಯಿಂದ ಪಂದ್ಯ ಅಭ್ಯಾಸ ಮಾಡಬೇಕಿದ್ದ ಚೆನ್ನೈ ತಂಡ ಸೆ. 1ರವರೆಗೆ ಕ್ವಾರಂಟೈನ್‍ನಲ್ಲಿರಲು ನಿರ್ಧರಿಸಿದೆ. ಈ ನಡುವೆ ಸುರೇಶ್ ರೈನಾ ಅವರು ಪಂದ್ಯದಿಂದಲೇ ಹೊರಬಂದಿರುವುದು ತಂಡಕ್ಕೆ ಬಾರಿ ಆಘಾತ ಉಂಟಾಗಿದೆ.