ಜಂಬೂ ಸವಾರಿ ವೇಳೆ ಬೆದರಿದ ಆನೆ – ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ…

62
firstsuddi

ಮಂಡ್ಯ : ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿ ವೇಳೆ ಅಂಬಾರಿ ಹೊತ್ತು ಹೊರಟಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ಬೆದರಿ ಒಂದು ಸುತ್ತು ತಿರುಗಿದೆ. ಆನೆ ಬೆದರುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

ಶ್ರೀರಂಗಪಟ್ಟಣದ ಬನ್ನಿಮಂಟಪ ಬಳಿ ಈ ಘಟನೆ ನಡೆದಿದ್ದು, ಅಂಬಾರಿ ಹೊತ್ತು ಜಂಬೂ ಸವಾರಿ ನಡೆಸುತ್ತಿದ್ದ ವೇಳೆ ಆನೆ ಪಟಾಕಿ-ತಮಟೆ ಶಬ್ಧಕ್ಕೆ ಬೆಚ್ಚಿ ಎರಡು ಸುತ್ತು ತಿರುಗಿ ಜನರತ್ತ ನುಗ್ಗಿದೆ. ತಕ್ಷಣವೇ ಆನೆ ವೈದ್ಯರು ಮತ್ತು ಮಾವುತರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ವಾದ್ಯ, ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಿದ ಬಳಿಕ ಆನೆ ಸಮಾಧಾನಗೊಂಡಿದೆ. ಜಂಬೂಸವಾರಿ ವೇಳೆ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ್ದರೂ ಸ್ಥಳೀಯರು ಪಟಾಕಿ ಸಿಡಿಸಿದ್ದರಿಂದ ಆನೆ ಬೆದರಿದೆ. ಆನೆಯ ಮೇಲೆ ಕಟ್ಟಿದ್ದ ಮರದ ಅಂಬಾರಿ ಕೆಳಗಿಳಿಸಿ ತಾಯಿ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆಯನ್ನು ಬೆಳ್ಳಿ ರಥದಲ್ಲಿ ಮುಂದುವರಿಸಲಾಗಿದೆ.