ಜಗತ್ತಿನ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ…

66
firstsuddi

ಟೆಹರಾನ್ : ಜಗತ್ತಿನ ಅತ್ಯಂತ ಕೊಳಕು ಮನುಷ್ಯ ಎಂದೇ ಹೆಸರು ಪಡೆದಿದ್ದ ಇರಾನಿನ ಅಮೌ ಹಾಜಿ(94) ನಿಧನರಾಗಿದ್ದಾರೆ.

ದಕ್ಷಿಣ ಪ್ರಾಂತ್ಯದ ಫಾರ್ಸ್ ನ ದೇಜ್ಗಾ ಗ್ರಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಾನು ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತೇನೆ ಎಂದು 50 ವರ್ಷಕ್ಕೂ ಹೆಚ್ಚು ಕಾಲ ಸ್ನಾನ ಮಾಡದೇ ಇದ್ದರು. ಆದರೆ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಅಲ್ಲಿನ ಗ್ರಾಮಸ್ಥರು ಆತನನ್ನು ಬಲವಂತವಾಗಿ ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನ ಮಾಡಿಸಿದ್ದರು.

ಹಾಜಿ ಬಾಲ್ಯದಲ್ಲೇ ಮನೆಯಲ್ಲಿ ಜಗಳ ಮಾಡಿ ಕಾಡಿಗೆ ತೆರಳಿದ್ದರು. ಬಳಿಕ ಅಲ್ಲೇ ಗುಹೆಯಲ್ಲಿ ವಾಸ ಮಾಡಲು ಆರಂಭಿಸಿದರು. ಇವರು ಕೊಳೆತ ಆಹಾರ ಮತ್ತು ಮಾಂಸಹಾರವನ್ನೇ ಸೇವಿಸುತ್ತಿದ್ದರು. ಪ್ರಾಣಿಗಳ ಮಲವನ್ನೇ ಸುಟ್ಟು ಸಿಗರೇಟಿನಂತೆ ಸೇದುತ್ತಿದ್ದರು. 2013ರಲ್ಲಿ ಹಾಜಿ ಜೀವನದ ಬಗ್ಗೆ ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ ಎಂಬ ಒಂದು ಕಿರು ಚಿತ್ರವನ್ನು ನಿರ್ಮಿಸಲಾಗಿದೆ.