ಜನರಿಗೆ ತೊಂದರೆ ಕೊಡುವುದಿರಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ : ಸಚಿವ ಸುಧಾಕರ್.

67
firstsuddi

ಬೆಂಗಳೂರು : ವಾರಾಂತ್ಯದ ಕರ್ಪ್ಯೂ ಸೇರಿದಂತೆ ಸರ್ಕಾರದ ಕಠಿಣ ನಿರ್ಬಂಧಗಳಿಗೆ ಜನಾಕ್ರೋಶ ವ್ಯಕ್ತವಾಗುತ್ತಿರುವ ಕುರಿತು ನಾಳೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಅಲ್ಲಿ ಏನು ನಿರ್ಧಾರವಾಗಲಿದೆ ಎಂದು ಕಾದು ನೋಡೋಣ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರನ್ನು ಸಂಕಷ್ಟಕ್ಕೆ ದೂಡುವುದು, ಅವರ ಭಾವನೆಗಳಿಗೆ ವಿರೋಧ ಮಾಡುವುದು ಸರ್ಕಾರದ ಉದ್ದೇಶವಲ್ಲ. ಅನಿವಾರ್ಯವಾಗಿ ಕೆಲ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಕೊಡುವುದರಿಂದ ಸರ್ಕಾರಕ್ಕೆ ಆದಾಯ, ಲಾಭ ಇಲ್ಲ. ನಾಳಿನ ಸಭೆಯಲ್ಲಿ ನಡೆಯುವ ಚರ್ಚೆಯಲ್ಲಿ ಎಲ್ಲವೂ ಸಮಾಲೋಚನೆಗೆ ಬರಲಿದೆ. ನಮ್ಮ ಕ್ರಮಗಳಿಂದ ಲಾಭ ಆಗಿದೆಯಾ?.. ಯಾವ ರೀತಿ ಆಗಿದೆ. ಒಂದು ವೇಳೆ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಏನಾಗುತ್ತಿತ್ತು. ಈಗ ನಿಯಮ ಸಡಿಲಿಕೆ ಮಾಡಿದರೆ ಏನಾಗಲಿದೆ ಎನ್ನುವುದು ಸೇರಿ ಎಲ್ಲವೂ ಚರ್ಚೆಯಾಗಲಿದೆ ಎಂದರು.

ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ವರ್ಸ್ಟ್ ಸಿನಾರಿಯಾದಲ್ಲಿ ನಿತ್ಯ 1 ರಿಂದ 1.20 ಲಕ್ಷ ಕೇಸ್ಗಳು ರಾಜ್ಯದಲ್ಲಿ ಬರಲಿದೆ. 60-70 ಸಾವಿರ ಕೇಸ್ಗಳು ಬೆಸ್ಟ್ ರೇಸ್ ಸಿನಾರಿಯಾದಲ್ಲಿ ಬರಲಿದೆ ಎನ್ನುವ ವರದಿ ನೀಡಿದ್ದಾರೆ. ಸದ್ಯ ಅವರು ನಿರೀಕ್ಷೆ ಮಾಡಿದ ರೀತಿಯೇ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಮಾರ್ಗಸೂಚಿ ಪಾಲಿಸಿ ಮುಂಜಾಗ್ರತಾ ಕ್ರಮ ವಹಿಸಿ ಎಂದು ಸಲಹೆ ನೀಡಿದರು.