ಬೆಂಗಳೂರು : ಸಾಲು ಸಾಲು ಹಬ್ಬಗಳು ಮುಂದಿವೆ. ದಸರಾ, ದೀಪಾವಳಿ ಹೀಗೆ ಹಬದ ಸಂಭ್ರಮದಲ್ಲಿರುವ ಮನೆ ಮಹಿಳೆಯರಿಗೆ ಭಾರೀ ಶಾಕ್ ಸಿಕ್ಕಿದೆ. ಅಡುಗೆ ಎಣ್ಣೆ ದರ ಏರಿಕೆ ಮಾಡಿ ಆದೇಶ ಹೊರಬಿದ್ದಿದೆ. ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಜನರಿಗೆ ಬೆಲೆ ಏರಿಕೆ ಶಾಕ್ ಸಿಗುತ್ತಿದೆ.
ಕಳೆದೊಂದು ವಾರದಿಂದ ಹಾವು ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರ ಈಗ ದಿಢೀರ್ ಆಗಿ ಗಗನಕ್ಕೇರಿದೆ. ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈಂಡ್ ಆಯಿಲ್ ದರ ಹೆಚ್ಚಳ ಮಡಿ ಆದೇಶ ಹೊರಡಿಸಲಾಗಿದೆ. ಈ ರೀತಿ ಅಡುಗೆ ಎಣ್ಣೆ ದರವನ್ನು ಇಷ್ಟು ದುಬಾರಿ ಮಟ್ಟಕ್ಕೆ ಈರಿಸಿರುವ ಬಗ್ಗೆ ಗ್ರಾಹಕರು ಹಾಗೂ ಹೋಟೆಲ್ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ಪೆಟ್ರೋಲ್, ಡೀಸೆಲ್ ಈಗ ಈಗ ಅಡುಗೆ ಎಣ್ಣೆಯ ಬೆಲೆಯನ್ನು ಕೂಡಾ ದಿಢೀರ್ ಏರಿಸಲಾಗಿದೆ. ದಸರಾ, ದೀಪಾವಳಿ ಸೇರಿ ಸರಣಿ ಹಬ್ಬಗಳ ಸಂಭ್ರಮದಲ್ಲಿದ್ದ ಜನತೆ ಈ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಅಡುಗೆ ಎಣ್ಣೆ ದರವನ್ನು ಲೀಟರ್ ಗೆ 20 ರಿಂದ 25 ರೂ.ಗೆ ಏರಿಕೆ ಮಾಡಲಾಗಿದೆ.
ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‍ಟಿ ವ್ಯಾಪ್ತಿಗೆ ಸೇರಿದೆ. ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನ ಅಡುಗೆ ಎಣ್ಣೆ ದರ ಇನ್ನ ಹೆಚ್ಚಾಗುತ್ತಾ ಅನ್ನೋ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.










