ಬೆಂಗಳೂರು : ನಗರದ ಚಾಮರಾಜಪೇಟೆಯ ವರ್ತಕರ ಬೀದಿಯಲ್ಲಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನ ಮಾದರಿ ಸೆಟ್ ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅಂದಾಜು 3.5 ಲಕ್ಷ ರೂ. ವೆಚ್ಚ ವ್ಯಯಿಸಲಾಗಿದೆ. ಈ ಗಣೇಶ ಮೂರ್ತಿ 3 ಅಡಿ ಎತ್ತರವಿದೆ.
ಬೆಳಗ್ಗೆ 10:30ರ ಸುಮಾರಿಗೆ ಪೂಜಾ ಕೈಂಕರ್ಯ ನೆರವೇರಿದೆ. ಗಣೇಶ ಪ್ರತಿಷ್ಠಾಪನೆ ವೇಳೆ ಮಾಜಿ ಪಾಲಿಕೆ ಸದಸ್ಯರಾದ ಅಲ್ತಾಫ್ ಖಾನ್, ಚಂದ್ರಶೇಖರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. 3 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಡ್ಡು, ಖರ್ಜಿಕಾಯಿ ಪ್ರಸಾದ ವಿತರಿಸಲಾಗಿದೆ. ಇಂದು ಸಂಜೆ ಅದ್ದೂರಿ ಮೆರವಣಿಗೆ ನಡೆದಿದ್ದು, ಯಡಿಯೂರು ಲೇಕ್ ನಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗಿದೆ.










