ಜಲಪಾತದಲ್ಲಿ ಕೊಚ್ಚಿಹೋಗಿದ್ದ ಶರತ್ ಮೃತದೇಹ ಪತ್ತೆ…

57
firstsuddi

ಶಿವಮೊಗ್ಗ: ಜಿಲ್ಲೆಯ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಯ ವೇಳೆ ಕಾಲು ಜಾರಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದ ಯುವಕ ಶರತ್ (23) ಮೃತದೇಹ ಪತ್ತೆಯಾಗಿದೆ. ಮಗ ಬದುಕಿ ಬರಬಹುದೆಂಬ ಕುಟುಂಬದ ನಿರೀಕ್ಷೆ ಸುಳ್ಳಾಗಿದೆ.

ಸ್ನೇಹಿತನೊಂದಿಗೆ ರೀಲ್ಸ್ ಮಾಡಲು ಹೋಗಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಯುವಕ ಶರತ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಹುಡುಕಾಡಿದರೂ ಶರತ್ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ. ಸತತ 8 ದಿನಗಳ ಶೋಧದ ಬಳಿಕ ನಿನ್ನೆ ಶರತ್ ಕುಮಾರ್ ಮೃತದೇಹ ಜಲಪಾತದ 200 ಮೀಟರ್ ಕೆಳಗಡೆ ಬಂಡೆ ಕಲ್ಲಿನ ಒಳಗೆ ಸಿಲುಕಿತ್ತು ಎನ್ನಲಾಗಿದೆ.