ಜುಲೈ 1ಕ್ಕೆ ಹಾಜರಾಗುವಂತೆ ಸಂಜಯ್ ರಾವತ್‍ಗೆ ಇಡಿ ಎರಡನೇ ಸಮನ್ಸ್…

78
firstsuddi

ಮುಂಬೈ : ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಎರಡನೇ ಸಮನ್ಸ್ ಜಾರಿ ಮಾಡಿದ್ದು, ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೇ ಪತ್ರಾಚಲ್ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ದಾಖಲೆಗಳನ್ನು ತರುವಂತೆ ರಾವುತ್ ಅವರಿಗೆ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸಂಜಯ್ ರಾವತ್ ಅವರಿಗೆ ಇಂದು (ಜೂನ್ 8ರಂದು) ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಆದರೆ, ಇಂದು ರಾವತ್ ವಿಚಾರಣೆಗೆ ಹಾಜರಾಗಿರಲಿಲ್ಲ. ಇತ್ತ, ರಾವತ್ ಪರ ವಕೀಲರು 13-14 ದಿನಗಳ ಕಾಲಾವಕಾಶ ನೀಡುವಂತೆ ಇಡಿಗೆ ಕೋರಿದ್ದರು. ಆದರೆ, ಮೂರೇ ದಿನಗಳ ಹೆಚ್ಚುವರಿ ಸಮಯವನ್ನು ನೀಡಿ ಜುಲೈ 1ಕ್ಕೆ ಹಾಜರಾಗುವಂತೆ ಎರಡನೇ ಸಮನ್ಸ್ ಜಾರಿ ಮಾಡಲಾಗಿದೆ.