ಕಠ್ಮಂಡುವಿನಲ್ಲಿ ಪಾನಿಪುರಿ ಮಾರಾಟ ನಿಷೇಧ! ಯಾಕೆ ಗೊತ್ತಾ?

63
firstsuddi

ಕಠ್ಮಂಡು : ನೇಪಾಳದ ಕಠ್ಮಂಡು ಕಣಿವೆಯ ಲಲಿತ್‍ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ. ಕಣಿವೆಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಕುರಿತು ಅಲ್ಲಿನ ಎಲ್ ಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಾನಿಪುರಿಯಲ್ಲಿ ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಂಡುಬಂದಿದೆ. ಇದರಿಂದಾಗಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಲರಾ ಹರಡುವುದನ್ನು ನಿಯಂತ್ರಿಸಲು ಪಾನಿಪುರಿ ಮಾರಾಟವನ್ನು ನಿಲ್ಲಿಸಲು ಮಹಾನಗರ ಪಾಲಿಕೆ ಸಿದ್ಧತೆಯನ್ನು ನಡೆಸಿದೆ.

ಕಠ್ಮಂಡು ಮಹಾನಗರದಲ್ಲಿ ಐದು, ಚಂದ್ರಗಿರಿ ಪುರಸಭೆ ಮತ್ತು ಬುಧಾನಿಲಕಂಠ ಪುರಸಭೆಯಲ್ಲಿ ತಲಾ ಒಂದು ಕಾಲರಾ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾಂಕ್ರಾಮಿಕ ರೋಗ ಮತ್ತು ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಚುಮಂಜಲಾಲ್ ದಾಶ್ ತಿಳಿಸಿದ್ದಾರೆ. ಕಾಲರಾ ಪೀಡಿತರು ಪ್ರಸ್ತುತ ತೇಕ್ ನಲ್ಲಿರುವ ಸುಕ್ರಾಜ್ ಟ್ರಾಪಿಕಲ್, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.