ಕೋಲಾರ : ಸೀರೆಯಲ್ಲಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡಿದ್ದು ಓರ್ವ ಬಾಲಕಿ ಸಾವನ್ನಪ್ಪಿದ್ದರೆ, ಮತ್ತೋರ್ವಳ ಸ್ಥಿತಿ ಗಂಭೀರಗೊಂಡಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪೆದ್ದೂರು ಗ್ರಾಮದಲ್ಲಿ ನಡೆದಿದೆ.
ಮೇಘನಾ (12) ಮೃತ ಬಾಲಕಿಯಾಗಿದ್ದು, ಮತ್ತೋರ್ವ ಬಾಲಕಿ ಶ್ರೀದೇವಿ ಎಂಬುವಳ ಸ್ಥಿತಿ ಗಂಭೀರವಾಗಿದ್ದು, ಕೋಲಾರದಿಂದ ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ನಿನ್ನೆ ಸಂಜೆ ಇಬ್ಬರೂ ಬಾಲಕಿಯರು ಮನೆಯಲ್ಲಿ ಸೀರೆಯಿಂದ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದರು. ಈ ವೇಳೆ ಒಂದು ಸೀರೆಯ ಉಯ್ಯಾಲೆಯಲ್ಲಿದ್ದ ಮೇಘನಾ ಕತ್ತಿಗೆ ಗಟ್ಟಿಯಾಗಿ ಸುತ್ತಿಕೊಂಡು ಉಸಿರು ಕಟ್ಟಿಕೊಂಡು ಸಾವನ್ನಪ್ಪಿದ್ದಾಳೆ. ಮತ್ತೊಂದು ಸೀರೆಯಲ್ಲಿ ದೇವಿಶ್ರೀ ಕತ್ತಿಗೆ ಸೀರೆ ಸುತ್ತಿಕೊಂಡು ಕಿರುಚಾಡುತ್ತಿದ್ದಾಗ ಇದನ್ನು ಗಮನಿಸಿದ ಗ್ರಾಮದ ನಿವಾಸಿಯೊಬ್ಬರು ಶ್ರೀದೇವಿಯ ಪ್ರಾಣ ಉಳಿಸಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










