ನವದೆಹಲಿ : ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಹರಡುತ್ತಿರುವ ಹಿನ್ನೆಲೆ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸುವ ವಿಮಾನ ಸೇವೆಯನ್ನು ತಾತ್ಕಲಿಕವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಭಾರತಕ್ಕೆ ಬ್ರಿಟನ್ ನಿಂದ ಆಗಮಿಸಿದ 20 ಮಂದಿಯಲ್ಲಿ ಹೊಸ ಪ್ರಬೇಧದ ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ರಿಟನ್ ನಿಂದ ಆಗಮಿಸುವ ವಿಮಾನವನ್ನು ನಿಷೇಧಿಸಲಾಗಿದ್ದು, ಈ ನಿರ್ಬಂಧವನ್ನು 2021 ರ ಜನವರಿ 7 ರವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಅವರು ತಿಳಿಸಿದ್ದಾರೆ.










