ಅಂಕಾರ : ಭೀಕರ ಭೂಕಂಪದಿಂದಾಗಿ ಟರ್ಕಿ ಹಾಗೂ ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿದೆ. 2 ವಾರಗಳಿಂದ 47 ಸಾವಿರ ಜನರು ಬಲಿಯಾಗಿದ್ದಾರೆ. ಇದೀಗ ಟರ್ಕಿ ಹಾಗೂ ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪವಾಗಿದೆ.
ನಿನ್ನೆ ಸಂಭವಿಸಿದ ಭೂಕಂಪ ಟರ್ಕಿಯ ಹಟಾಯ್ ಪ್ರದೇಶದ ಡೆಫ್ನೆ ಪಟ್ಟಣದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಪತ್ತೆಹಚ್ಚಲಾಗಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ದಾಖಲಾಗಿದ್ದು, ಘಟನೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
2 ವಾರಗಳಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಉಂಟಾಗುತ್ತಿರುವ ಭೂಕಂಪಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 47 ಸಾವಿರಕ್ಕೆ ಏರಿಕೆಯಾಗಿದೆ. ಇದೀಗ ಮತ್ತೆ ಮತ್ತೆ ಭೂಕಂಪಗಳು ಸಂಭವಿಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.