ಟ್ರಕ್ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿ- ಸ್ಥಳದಲ್ಲೇ 11 ಮಂದಿ ಸಾವು…

1169
firstsuddi

ಜೋಧ್‍ಪುರ : ಟ್ರಕ್ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 11 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೋಧ್‍ಪುರ್ ಜಿಲ್ಲೆಯ ಬಲೋತ್ರ-ಪಲೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಲೋತ್ರ ಗ್ರಾಮದ ನಿವಾಸಿಗಳು ರಾಮ ದೇವೋರ್ ಪ್ರದೇಶದಲ್ಲಿರುವ ರಾಮದೇವೋ ಜಾನಪದ ದೇವರಿಗೆ ಪೂಜೆ ಸಲ್ಲಿಸಲು ಒಟ್ಟು 11 ಮಂದಿ ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟ್ರಕ್ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಮೂವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.