ಟ್ವಿಟ್ಟರ್ ಖರೀದಿ ನಿರ್ಧಾರ ಕೈಬಿಟ್ಟ ಎಲೋನ್ ಮಸ್ಕ್.

58
firstsuddi

ವಾಷಿಂಗ್ಟನ್ : ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ನಿರ್ಧಾರ ಕೈಬಿಟ್ಟಿದ್ದಾರೆ. ನಕಲಿ ಖಾತೆಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಸಂಪೂರ್ಣ ಮಾಹಿತಿಯನ್ನು ನೀಡದ್ದಕ್ಕೆ ಖರೀದಿ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮಸ್ಕ್ ಈ ಹಿಂದೆ 44 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಕಂಪನಿಯು ತನ್ನ ವರದಿಯಲ್ಲಿ ಹೇಳುವಂತೆ ಸ್ಪ್ಯಾಮ್ ಖಾತೆಗಳ ಸಂಖ್ಯೆ ಶೇಕಡಾ 5 ಕ್ಕಿಂತ ಕಡಿಮೆಯಿದೆ ಎಂಬುದಕ್ಕೆ ಪುರಾವೆಗಳನ್ನು ತೋರಿಸುವವರೆಗೆ ಒಪ್ಪಂದವು ಮುಂದುವರಿಯುವುದಿಲ್ಲ. ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ನೀಡಿದ ಮಾಹಿತಿಯು ನಿಖರವಾಗಿದೆ ಎಂದು ನಂಬಿದ್ದರಿಂದ ಖರೀದಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೆ ಎಂದು ಅವರು ಈ ಹಿಂದೆ ಹೇಳಿದ್ದರು.

ಮತ್ತೊಂದೆಡೆ ಟ್ವಿಟ್ಟರ್ ಬೋರ್ಡ್ ರದ್ದು ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ. ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಟ್ವಿಟ್ಟರ್ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್ ನಿರ್ಧಾರವೇ ಕಾರಣ ಎಂದು ಆರೋಪಿಸಿದೆ.