ಬೆಂಗಳೂರು: ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶರತ್ (26) ಬಂಧಿತ ಹಂತಕ. ಈತ ಕಳೆದ ಮಂಗಳವಾರ ತಂದೆ-ತಾಯಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಕೋಡಿಗೆಹಳ್ಳಿ ಪೊಲೀಸರು ಕೊಡಗು ಜಿಲ್ಲೆಯಲ್ಲಿದ್ದವನನ್ನು ಹುಡುಕಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣೆಯ ವೇಳೆ, ಪೋಷಕರು ತನ್ನ ಬಗ್ಗೆ ನೆಗ್ಲೆಕ್ಟ್ ಮಾಡುತ್ತಿದ್ದರು. ಈ ಕಾರಣಕ್ಕಾಗಿ ತಾನು ಅವರನ್ನು ಕೊಲೆ ಮಾಡಿರುವುದಾಗಿ ಶರತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯ ಬಳಿಕ ಕೊಡಗಿನ ಕಡೆಗೆ ಹೋಗಿರುವ ಈತ ಕಳೆದ ಮೂರು ದಿನದಿಂದ ಕಾರಿನಲ್ಲೆ ದಿನ ಕಳೆದಿರೋದು ಪೊಲೀಸರ ತನಿಖೆಯ ವೇಳೆ ಬಹಿರಂಗವಾಗಿದೆ.
ಸದ್ಯ ಆರೋಪಿ ಶರತ್ನನ್ನು ಕೋಡಿಗೆಹಳ್ಳಿ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.










