ತನ್ನದೇ ಬಸ್ ಅಡಿ ಬಿದ್ದು ಮಾಲೀಕ ಸಾವು…

51
firstsuddi

ಉಡುಪಿ: ತನ್ನ ಸ್ವಂತ ಬಸ್ ಅಡಿ ಬಿದ್ದು ಮಾಲೀಕ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಯಾನಂದ ಶೆಟ್ಟಿ ಮೃತ ದುರ್ದೈವಿ. ವರದಿಗಳ ಪ್ರಕಾರ, ದಯಾನಂದ ಶೆಟ್ಟಿ ಅವರ ಬಸ್ ಅನ್ನು ರಿಪೇರಿಗಾಗಿ ಅತ್ರಾಡಿಯ ಗ್ಯಾರೇಜ್​ಗೆ ಕೊಂಡೊಯ್ಯಲಾಗಿತ್ತು. ಹೀಗಾಗಿ ತಮ್ಮ ಬಸ್ ನ ದುರಸ್ತಿ ಕಾರ್ಯ ನೋಡಿಕೊಳ್ಳಲು ಸ್ವತಃ ದಯಾನಂದ ಅವರೇ ಗ್ಯಾರೇಜ್​ಗೆ ಹೋಗಿದ್ದರು. ಅದರಂತೆ ಬಸ್ ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ, ಗ್ಯಾರೇಜ್ ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದಾಗ ಬಸ್ ಮುಂದಕ್ಕೆ ಚಲಿಸಿದೆ.

ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ದಯಾನಂದ ಅವರು ಬಸ್ ಅಡಿ ಬಿದ್ದು ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಯಾನಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.