ಮಂಗಳೂರು : ತನ್ನೊಂದಿಗೆ ಮದುವೆಯಾಗಬೇಕಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕುದ್ರೋಳಿ ನಿವಾಸಿ ಶ್ರೀನಿವಾಸ ಭಟ್ (35) ಬಂಧಿತ ಆರೋಪಿ. ಶ್ರೀನಿವಾಸ ಭಟ್ ಜೊತೆ ನಗರದ ಯುವತಿಯೊಂದಿಗೆ ಮದುವೆ ಮಾತುಕತೆ ನಡೆದಿತ್ತು. ಅಲ್ಲದೇ ನಿಶ್ಚಿತಾರ್ಥಕ್ಕೆ ದಿನಾಂಕವು ನಿಗದಿಯಾಗಿತ್ತು. ಈ ಮಧ್ಯೆ ಯುವಕ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡು ಚಾಟಿಂಗ್ ಆರಂಭಿಸಿದ್ದಾನೆ.
ಯುವತಿಗೆ ಅಶ್ಲೀಲ ಸಂದೇಶ, ವಿಚಿತ್ರ ಸಂದೇಶಗಳನ್ನು ಕಳುಹಿಸುತ್ತಿದ್ದ. ಈತನ ವಿಚಿತ್ರ ಸಂದೇಶದ ಹಿನ್ನೆಲೆ ನಿಶ್ಚಿತಾರ್ಥವನ್ನು ಯುವತಿ ಮನೆಯವರು ಮುಂದೂಡಿದ್ದರು. ಇದರ ನಂತರವೂ ಆತ ಅಶ್ಲೀಲ ಸಂದೇಶ ಕಳುಹಿಸುವುದನ್ನು ಮುಂದುವರಿಸಿದ್ದ. ಆದ್ರೆ ಯುವತಿಗೆ ಅವನೊಬ್ಬ ಸಲಿಂಗಕಾಮಿ ಎಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಯುವಕನ ಕಿರುಕುಳಕ್ಕೆ ಬೇಸತ್ತು ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಶ್ರೀನಿವಾಸ್ ಭಟ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.










