ತಮಿಳುನಾಡು ಸೂಪರ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ-ಸಿಎಂ ಆಗುವ ಆಸೆ ಇಲ್ಲ ಎಂದ ರಜನಿಕಾಂತ್…

260
firstsuddi

ಚೆನ್ನೈ : ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು, ನಾನು ಎಂದಿಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚಿಂತಿಸುವುದಿಲ್ಲ. ಈಗಿನ ರಾಜಕೀಯ ಬದಲಾವಣೆಯಾಗಬೇಕು ಎಂಬುವುದೇ ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ. ಇಂದು ಚೆನ್ನೈನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ರಾಜಕೀಯದಲ್ಲಿ ಇಬ್ಬರು ಪ್ರಮುಖ ನಾಯಕರಿದ್ದರು. ಅವರಲ್ಲಿ ಒಬ್ಬರು ಜಯಲಲಿತಾ ಹಾಗೂ ಇನ್ನೊಬ್ಬರು ಕಲೈನರ್. ಅಂತಹ ಪ್ರಮುಖ ನಾಯಕರಿಗೆ ಜನರು ಮತ ನೀಡುತ್ತಿದ್ದರು. ಆದರೆ ಈಗಿನ ರಾಜಕಾರಣದಲ್ಲಿ ಅಂತಹ ವಾತಾವರಣವಿಲ್ಲ. ವ್ಯವಹಾರದಂತೆ ಆಗಿರುವ ಪ್ರಸ್ತುತ ರಾಜಕೀಯವನ್ನು ಬದಲಾವಣೆ ತರಬೇಕಿದೆ. ಹೀಗಾಗಿ ನಾವು ಆಂದೋಲನವನ್ನು ನಡೆಸಬೇಕಿದೆ. ಏಕ ನಾಯಕ ರಾಜಕೀಯ ಬದಲಾಗಬೇಕು. ನಾನು ಪಕ್ಷದ ನಾಯಕನಾಗುತ್ತೇನೆ, ಆದರೆ ಮುಖ್ಯಮಂತ್ರಿ ಆಗುವ ಆಸೆ ನನಗಿಲ್ಲ. ಪಕ್ಷದ ಅಧ್ಯಕ್ಷರು ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಮೂಗು ತೂರಿಸಬಾರದು. ಹೊಸ ಪಕ್ಷ ಕಟ್ಟಿ ಯುವಕರಿಗೆ ಪಕ್ಷದಲ್ಲಿ ಮೊದಲ ಆಧ್ಯತೆ ನೀಡುತ್ತೇನೆ. ಪ್ರಾಮಾಣಿಕರಿಗೆ ಸೀಟ್ ಕೊಡುತ್ತೇನೆ ಎಂದು ತಿಳಿಸಿದರು.