ತಂದೆಯೊಂದಿಗೆ ಬೈಕ್‍ನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಬಿದ್ದ ಮರದ ಕೊಂಬೆ-ಗಂಭೀರ ಗಾಯ…

193
firstsuddi

ಬೆಂಗಳೂರು : ತಂದೆಯೊಂದಿಗೆ ಬೈಕ್‍ನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಮರದ ಒಣಗಿದ ಕೊಂಬೆ ತಲೆ ಮೇಲೆ ಬಿದ್ದು ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ರಾಮಮೂರ್ತಿ ನಗರದ ಕೌದೇನ ಹಳ್ಳಿಯಲ್ಲಿ ನಡೆದಿದೆ. ತ್ರಿಷಾ(8) ಗಾಯಗೊಂಡ ಬಾಲಕಿ ಎಂದು ಗುರುತಿಸಲಾಗಿದ್ದು, ಬಾಲಕಿ ಎಂದಿನಂತೆ ಇಂದು ಕೂಡಾ ತನ್ನ ತಂದೆಯೊಂದಿಗೆ ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಮರದ ಒಣಗಿದ ಕೊಂಬೆಯೊಂದು ತಂದೆ ಮಗಳ ಮೇಲೆ ಬಿದ್ದಿದ್ದು, ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮರ ತೆರವುಗೊಳಿಸುವಂತೆ ಮನವಿ ಮಾಡಿದರೂ ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಾಮಮೂರ್ತಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.