ನವದೆಹಲಿ : ವಿಶ್ವದಾಧ್ಯಂತ ಭೀತಿ ಹೆಚ್ಚಿಸಿರುವ ಕೊರೊನಾ ವೈರಸ್ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ಈವರೆಗೂ 73 ಮಂದಿಯಲ್ಲಿ ಕೊರೊನಾ ಸೋಂಲು ಕಾಣಿಸಿಕೊಂಡಿದ್ದು, ಅವರಲ್ಲಿ ಭಾರತದಲ್ಲಿರುವ ವಿದೇಶಿಗರೂ ಸೇರಿಕೊಂಡಿದ್ದಾರೆ. ಕೇರಳದಲ್ಲಿ 17, ಹರಿಯಾಣದಲ್ಲಿ 14, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ದೆಹಲಿಯಲ್ಲಿ 6, ಕರ್ನಾಟಕ 4, ರಾಜಸ್ಥಾನ 3, ಲಢಾಕ್ 3, ಹಾಗೂ ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಭಾರತದಲ್ಲಿ ಒಟ್ಟು 73ಮಂದಿಯ ಪೈಕಿ 56 ಮಂದಿ ಭಾರತೀಯರು ಹಾಗೂ 17 ಮಂದಿ ವಿದೇಶಿಗರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.










