ತಮ್ಮನ ಸಾವಿನ ಸುದ್ದಿ ತಿಳಿದು ಅಣ್ಣ ಹೃದಯಾಘಾತದಿಂದ ಸಾವು…

936
firstsuddi

ಬೀದರ್ : ತಮ್ಮನ ಸಾವಿನ ವಿಷಯ ತಿಳಿದು ಮನನೊಂದು ಅಣ್ಣ ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ತಾಲ್ಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ. ಅಜರುದ್ದೀನ್ ಬಾಬುಮಿಯ್ಯ ಮುಮೀನ್(34) ಹಾಗೂ ಮಹಮ್ಮದ್ ಸಾಬ್ ಬಾಬುಮಿಯ್ಯ ಮುಮೀನ್(39) ಮೃತ ಸಹೋದರರು ಎಂದು ಗುರುತಿಸಲಾಗಿದ್ದು, ತಮ್ಮ ಅಜರುದ್ದೀನ್ ಅವರು ನಿನ್ನೆ ಸಂಜೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದು, ಈ ವಿಷಯ ತಿಳಿದ ಹುಮನಾಬಾದ್‍ನಲ್ಲಿ ಇದ್ದ ಹಿರಿಯ ಸಹೋದರ ಮಹಮ್ಮದ್ ಸಾಬ್ ಅವರು ತಮ್ಮ ಗ್ರಾಮಕ್ಕೆ ಬಂದಿದ್ದಾರೆ. ಆದರೆ ತನ್ನ ಸಹೋದರನ ಸಾವನ್ನು ಸಹಿಸಿಕೊಳ್ಳಲಾಗದೆ ಮಹಮ್ಮದ್ ಸಾಬ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಬಸವ ಕಲ್ಯಾಣ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಹಮ್ಮದ್ ಸಾಬ್ ಅವರು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.