ಆಂಧ್ರಪ್ರದೇಶ: ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟಿಗಳ ಮಂಡಳಿಯ 54ನೇ ಅಧ್ಯಕ್ಷರಾಗಿ ಬಿ.ಆರ್.ನಾಯ್ಡು ಅವರು ಆಯ್ಕೆಯಾಗಿದ್ದಾರೆ. ಅವರು ಇಂದು ಬೆಳಿಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರು ಹೊಸ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ಬಿ.ಆರ್.ನಾಯ್ಡು ಮೊದಲಿಗೆ ವರಾಹ ಸ್ವಾಮಿಯ ದರ್ಶನ ಪಡೆದು, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ 1ರ ಮೂಲಕ ದೇವಾಲಯದೊಳಗೆ ಪ್ರವೇಶಿಸಿದರು. ವೆಂಕಟೇಶ್ವರ ಸ್ವಾಮಿ ದರ್ಶನದ ನಂತರ, ಪುರೋಹಿತರು ರಂಗನಾಯಕುಲ ಮಂಟಪದಲ್ಲಿ ವೈದಿಕ ಮಂತ್ರಗಳೊಂದಿಗೆ ಆಶೀರ್ವಾದ ನೀಡಿದರು. ತಿರುಪತಿ ಲಡ್ಡು ಪ್ರಸಾದದ ಬಗ್ಗೆ ವಿವಾದ ಕಾಣಿಸಿಕೊಂಡ ಒಂದು ತಿಂಗಳ ನಂತರ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿರುವುದು ವಿಶೇಷ.










