ನವದೆಹಲಿ : ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡೀ ಅಧಿಕಾರಿಗಳ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಯ ಆರ್ಎಂಎಲ್ ಆಸ್ಪತ್ರೆಯಿಂದ ಪೊಲೀಸರು ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಇಡೀ ಅಧಿಕಾರಿಗಳ ಕಸ್ಟಡಿ ಅಂತ್ಯವಾಗಿದ್ದರಿಂದ ಡಿಕೆಶಿ ಅ.1ರ ತನಕ ಶಿವಕುಮಾರ್ ನ್ಯಾಯಾಂಗ ಬಂಧನಲ್ಲಿರಬೇಕು ಎಂದು ಇ.ಡಿ. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಆದೇಶ ಪ್ರಕಟಿಸಿದ್ದರು. ಆದರೆ ಡಿಕೆಶಿ ಅವರಿಗೆ ಹೈ ಬಿಪಿ ಹಾಗೂ ಶುಗರ್ ಇದ್ದ ಹಿನ್ನೆಲೆ ಆರ್ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಡಿಕೆಶಿ ಅವರ ಆರೋಗ್ಯ ತಪಾಸಣೆಯನ್ನು ನಡೆಸಿದ ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರವಾಗಿದೆ ಎಂಬ ವರದಿಯನ್ನು ನೀಡಿದ ಬಳಿಕ ಪೊಲೀಸರು ಡಿ.ಕೆ. ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕರೆದುಕೊಂಡು ಹೋಗಿದ್ದು, ಡಿ.ಕೆ. ಶಿವಕುಮಾರ್ ಅವರಿಗೆ ತಿಹಾರ್ ಜೈಲ್ನ ಸೆಲ್ ನಂ 7ರಲ್ಲಿ ವ್ಯವಸ್ಥೆ ಮಾಡಲಾಗಿದೆ.










