ಬೆಂಗಳೂರು : ನಿನ್ನೆ ಸಂಜೆ ಕೋಣನಕುಂಟೆ ಕ್ರಾಸ್ ಬಳಿ ಅಮೃತ ನಾಯ್ಡು ಮತ್ತು ಸಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಸ್ಕೂಟಿಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಲ್ಲಿದ್ದ ಮಗು-ತಾಯಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ನ ಮಡ್ ಗಾರ್ಡ್ ಬಾಲಕಿ ಸಮನ್ವಿಯ ಹೊಟ್ಟೆಗೆ ತಾಗಿದ್ದರಿಂದ ತೀವ್ರವಾದ ಗಾಯವಾಗಿದೆ. ಇದರಿಂದ ಹೆಚ್ಚಿನ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ತನಿಖೆಯಲ್ಲಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಇರುವುದು ತಿಳಿದುಬಂದಿದ್ದು, ಟಿಪ್ಪರ್ ಗಾಡಿ ಮತ್ತು ಚಾಲಕ ಮಂಚೇಗೌಡನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.










