ತುಮಕೂರು : ಮತ್ತೋರ್ವ ಪುನೀತ್ ಅಭಿಮಾನಿ ಸಾವು…

54
firstsuddi

ತುಮಕೂರು : ಮತ್ತೋರ್ವ ಪುನೀತ್ ರಾಜ್​​ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ (32) ಮೃತ ವ್ಯಕ್ತಿ. ಪುನೀತ್ ರಾಜ್​​ಕುಮಾರ್ ಮೃತಪಟ್ಟ ನಂತರ ಬೆಂಗಳೂರಿಗೆ ತೆರಳಿ ಎರಡು ದಿನಗಳ ಕಾಲ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದ ಶ್ರೀನಿವಾಸ್, ಅಂತಿಮ ದರ್ಶನ ಪಡೆದು ಮನೆಗೆ ಮರಳಿದಾಗ ಮಾನಸಿಕವಾಗಿ ನೊಂದಿದ್ದ. ಬಳಿಕ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ.