ದಸರಾ ಗಜಪಡೆಯ ಮೊದಲ ಪಟ್ಟಿ ಫೈನಲ್…

69
firstsuddi

ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1ರ ಗಜಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ.

9 ಆನೆಗಳ ಹೆಸರು ಇಂತಿವೆ:
ನಾಗರಹೊಳೆ ಆನೆ ಶಿಬಿರದಿಂದ – 1) ಅಭಿಮನ್ಯು 2) ಭೀಮ 3) ಮಹೇಂದ್ರ
ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ – 4) ಅರ್ಜುನ
ದುಬಾರೆ ಆನೆ ಶಿಬಿರದಿಂದ – 5) ಧನಂಜಯ 6) ಗೋಪಿ
ಬಂಡೀಪುರದ ರಾಮಪುರ ಶಿಬಿರದಿಂದ – 7) ಪಾರ್ಥ ಸಾರಥಿ
ದುಬಾರೆ ಆನೆ ಶಿಬಿರದಿಂದ – 8) ವಿಜಯ
ಭೀಮನಕಟ್ಟೆ ಆನೆ ಶಿಬಿರದಿಂದ – 9) ವರಲಕ್ಷಿ ಆನೆಗಳು ಬರಲಿದೆ.

ಈ ಬಾರಿಯ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 1ಕ್ಕೆ ಗಜಪಯಣ ಆರಂಭವಾಗಲಿದ್ದು, ಅದೇ ದಿನ ಗಜಪಡೆಯು ಮೈಸೂರಿಗೆ ಆಗಮಿಸಲಿವೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.