ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ ಮೌನಿರಾಯ್.

107
firstsuddi

ಹೈದರಾಬಾದ್(ತೆಲಂಗಾಣ) : ಕೆಜಿಎಫ್ ಬೆಡಗಿ ಮೌನಿರಾಯ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಕರ ಸೂರಜ್ ನಂಬಿಯಾರ್ ಜೊತೆ ಮೌನಿರಾಯ್ ಹಸೆಮಣೆ ಏರಿದ್ದಾರೆ. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಗೋವಾದಲ್ಲಿ ಇವರ ವಿವಾಹ ನೆರವೇರಿದೆ. ಮೌನಿ ರಾಯ್ ಅವರು ಪಶ್ಚಿಮ ಬಂಗಾಳ ಮೂಲದವರು. ಅವರನ್ನು ಕೈ ಹಿಡಿಯುತ್ತಿರುವ ಸೂರಜ್ ನಂಬಿಯಾರ್ ಅವರು ಕೇರಳ ಮೂಲದವರು. ಹೀಗಾಗಿ ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ಮದುವೆ ನಡೆದಿದೆ. ಕೋವಿಡ್ ಕಾರಣ ದಂಪತಿಯ ಆಪ್ತರು, ಕುಟುಂಬಸ್ಥರು ಮಾತ್ರ ಮದುವೆ ಸಾಕ್ಷಿಯಾಗಿದ್ದಾರೆ. ಈ ನವ ಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.