ದೆಹಲಿಯಲ್ಲಿ ದಟ್ಟ ಮಂಜು: ವಿಮಾನ ಕಾರ್ಯಾಚರಣೆಯಲ್ಲಿ ತಡೆ.

27

ನವದೆಹಲಿ: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದಲೇ ದಟ್ಟ ಮಂಜು ಆವರಿಸಿದ್ದು ವಾಹನ ಸವಾರರಿಗೆ ಸಂಕಷ್ಟವನ್ನು ಉಂಟುಮಾಡಿದೆ. ದಟ್ಟ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ತೊಡಕು ಸಂಭವಿಸಿದೆ. ಅಲ್ಲದೇ ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಹೆಚ್ಚಿನ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡ್ಡಿ ಉಂಟಾಗಿದೆ. CAT-III ಸಾಮಥ್ರ್ಯದ ವಿಮಾನಗಳು ಮಾತ್ರ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುತ್ತಿವೆ. ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಕುರಿತು ತಿಳಿದುಕೊಂಡು ಏರ್‌ಪೋರ್ಟ್ಗೆಗೆ ಹೋಗಿ ಎಂದು ಇಂಡಿಗೊ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಲಾಗಿದೆ. ಇನ್ನೂ ವರದಿ ಪ್ರಕಾರ 100ಕ್ಕೂ ಹೆಚ್ಚಿನ ವಿಮಾನಗಳ ಕಾರ್ಯಾಚರಣೆಯಲ್ಲಿ ಏರುಪೇರಾಗಿದೆ. ಈ ನಡುವೆ ವಿಮಾನಗಳ ಕಾರ್ಯಾಚರಣೆ ಕುರಿತು ವಿಮಾನಯಾನ ಕಂಪನಿಗಳ ಜೊತೆ ಸಂಪರ್ಕದಲ್ಲಿರಿ ಎಂದಿರುವ ದೆಹಲಿ ವಿಮಾನ ನಿಲ್ದಾಣವು, ಉಂಟಾದ ಸಮಸ್ಯೆಗೆ ಪ್ರಯಾಣಿಕರಲ್ಲಿ ಕ್ಷಮೆಯನ್ನು ಕೋರಿದೆ.