ದೆಹಲಿ ಮದ್ಯ ಹಗರಣ : ಟಿಆರ್‌ಎಸ್ ಎಂಎಲ್‌ಸಿ ಕವಿತಾಗೆ ಸಿಬಿಐ ನೋಟಿಸ್…

72
firstsuddi

ನವದೆಹಲಿ : ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಆರ್‌ಎಸ್ ಎಂಎಲ್‌ಸಿ ಮತ್ತು ಸಿಎಂ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಸಿಬಿಐ ನೋಟಿಸ್ ನೀಡಿದೆ.

ಸಿಬಿಐ ಸೆಕ್ಸನ್ 160 ಸಿಆರ್ ಪಿಸಿ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ಇದೇ ತಿಂಗಳ 6ರಂದು ಬೆಳಗ್ಗೆ 11 ಗಂಟೆಗೆ ಹೈದರಾಬಾದ್ ನಲ್ಲಿ ವಿಚಾರಣೆ ನಡೆಯಲಿದೆ.

ದೆಹಲಿ ಮದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ 36 ಜನರನ್ನು ಆರೋಪಿ ಅಮಿತ್ ಅರೋಡಾ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಪ್ರಕರಣ ಸಂಬಂಧ ಶಂಕೆ ವ್ಯಕ್ತಪಡಿಸಿ ಇಡಿ ಅವರನ್ನು ಬಂಧಿಸಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಿಮಾಂಡ್ ವರದಿಯಲ್ಲಿ ಕವಿತಾ ಅವರ ಹೆಸರು ಉಲ್ಲೇಖವಾಗಿತ್ತು.