ನವದೆಹಲಿ : ದೇಶದಲ್ಲಿ ಈಗಾಗಲೇ ನಿಷೇಧವಾಗಿದ್ದ ಪಬ್‍ಜಿ ಗೇಮ್ ಇಂದಿನಿಂದ ಸಂಪೂರ್ಣ ಬಂದ್ ಆಗಿದ್ದು, ಪಬ್‍ಜಿ ಪ್ರೇಮಿಗಳಿಗೆ ಶಾಕ್ ನೀಡಿದಂತಾಗಿದೆ. ಲಡಾಕ್ ಗಡಿಯಲ್ಲಿ ಚೀನಾ-ಭಾರತ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಪಬ್‍ಜಿ ಗೇಮಿಂಗ್ ಆಪ್ ಸೇರಿದಂತೆ ಚೀನಾ ಮೂಲದ ಆಪ್‍ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ನಿಷೇಧದ ಬಳಿಕ ಪಬ್‍ಜಿ ಗೇಮಿಂಗ್ ಆಪ್ ಅನ್ನು google play store ಹಾಗೂ apple app store ನಿಂದ ತೆಗೆಯಲಾಗಿತ್ತು. ಆದರೆ ಈ ಮೊದಲೇ ತಮ್ಮ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡಿದ್ದವರಿಗೆ ಇದನ್ನು ಆಡಲು ಅವಕಾಶವಿತ್ತು. ಆದರೆ ಇದೀಗ ಪಬ್‍ಜಿ ಪ್ರಿಯರಿಗೆ ಈ ಅವಕಾಶಗಳು ಕೈತಪ್ಪಿದ್ದು, ಭಾರತದಲ್ಲಿರುವ ಟೆನ್ಸೆಂಟ್ ಗೇಮ್ಸ್ ಕಂಪನಿ ತನ್ನ ಸರ್ವರ್‍ಗಳನ್ನು ಬಂದ್ ಮಾಡಲಿದೆ. ಇದರಿಂದಾಗಿ ಇಂದಿನಿಂದ ಡೌನ್‍ಲೋಡ್ ಮಾಡಿಕೊಂಡು ಆಟವಾಡುತ್ತಿದ್ದವರಿಗೂ ಗೇಮ್ ಆಡಲು ಅವಕಾಶ ಇರುವುದಿಲ್ಲ.










