ದೇಶದಲ್ಲಿ ಓಮಿಕ್ರಾನ್ ಆರ್ಭಟ – ಒಂದು ಸಾವಿರ ಗಡಿ ದಾಟಿದ ಕೊರೊನಾ ರೂಪಾಂತರಿ…

64
firstsuddi

ನವದೆಹಲಿ : ದೇಶದಲ್ಲಿ ಓಮಿಕ್ರಾನ್ ಆರ್ಭಟ ಮುಂದುವರಿದಿದ್ದು, ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ನಿನ್ನೆ 309 ಹೊಸ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,270ಕ್ಕೆ ಏರಿದೆ. ಈವರೆಗೆ 374 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದೆ.

ಮಹಾರಾಷ್ಟ್ರದಲ್ಲಿ 450 ಪ್ರಕರಣಗಳು ಪತ್ತೆಯಾಗಿದ್ದು, ಅಗ್ರಸ್ಥಾನದಲ್ಲಿದೆ. ದೆಹಲಿಯಲ್ಲಿ 320, ಗುಜರಾತ್ ನಲ್ಲಿ 97, ರಾಜಸ್ತಾನ್ ನಲ್ಲಿ 69, ಕೇರಳದಲ್ಲಿ 109, ತೆಲಂಗಾಣದಲ್ಲಿ 62, ಆಂಧ್ರಪ್ರದೇಶದಲ್ಲಿ 16 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.