ದೇಶದಲ್ಲಿ ಓಮಿಕ್ರಾನ್ ಪ್ರಕರಣ ಸಂಖ್ಯೆ 578ಕ್ಕೆ ಏರಿಕೆ…

88
firstsuddi

ನವದೆಹಲಿ : ಭಾರತದಲ್ಲಿ ಓಮಿಕ್ರಾನ್ ಅಟ್ಟಹಾಸ ಮುಂದುವರೆಯುತ್ತಿದ್ದು, ಸದ್ಯ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 578ಕ್ಕೇರಿದೆ.

ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಇಂದು 63 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 142 ತಲುಪಿದೆ. ಇನ್ನು ಮಹಾರಾಷ್ಟ್ರದಲ್ಲಿ 141, ಗುಜರಾತ್ 49, ತೆಲಂಗಾಣ 41, ಕೇರಳ 57, ತಮಿಳುನಾಡಿನಲ್ಲಿ 34, ಕರ್ನಾಟಕ 31, ರಾಜಸ್ಥಾನ 43, ಉತ್ತರಪ್ರದೇಶ 2, ಮಧ್ಯಪ್ರದೇಶ 9, ಆಂಧ್ರಪ್ರದೇಶ 6, ಪಶ್ಚಿಮ ಬಂಗಾಳ 6, ಹರಿಯಾಣ 4, ಒಡಿಶಾ 4, ಚಂಡೀಗಢ 3, ಜಮ್ಮು ಮತ್ತು ಕಾಶ್ಮೀರ 3 ಹಾಗೂ ಉತ್ತರಖಂಡ್ ಲಡಾಕ್, ಹಿಮಾಚಲ ಪ್ರದೇಶ ತಲಾ 1 ಪ್ರಕರಣಗಳು ಪತ್ತೆಯಾಗಿವೆ.