ದ್ವಿತೀಯ ಪಿಯುಸಿ : 600ಕ್ಕೆ 584 ಅಂಕ ಪಡೆದ ಯಜ್ಞ.

117
firstsuddi

ಕೊಟ್ಟಿಗೆಹಾರ : ದೇವನಗೂಲ್ ಗ್ರಾಮದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 584 (97.33%) ಅಂಕ ಪಡೆದಿದ್ದಾರೆ.

ಮಂಗಳೂರಿನ ದೇವಿನಗರ ತಾಲಾಪಾಡಿಯ ಶಾರದಾ ವಿದ್ಯಾ ನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆಯುವ ಮೂಲಕ ಕಾಲೇಜಿಗೆ 5ನೇ ಸ್ಥಾನ ಪಡೆದಿದ್ದಾರೆ. ಯಜ್ಞ ಡಿ.ಜೆ, ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಎಚ್.ಎಚ್.ಮಧುರ ಮತ್ತು ಡಿ.ಕೆ ಜಯಂತ್ ದಂಪತಿಗಳ ಪುತ್ರಿ.