ನಕ್ಸಲರು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ, ಕರ್ನಾಟಕ ಮೂಲದ ಸಿ ಆರ್ ಪಿ ಎಫ್ ಯೋಧ ಹುತಾತ್ಮ…

283
firstsuddi

ಕಲಬುರ್ಗಿ : ಛತ್ತೀಸ್‍ಗಡದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ನಿನ್ನೆ ನಡೆದ ನಕ್ಸಲರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಿ ಆರ್ ಪಿ ಎಫ್  ಯೋಧರು ಹುತಾತ್ಮರಾಗಿದ್ದು, ಕರ್ನಾಟಕದ ಕಲಬುರ್ಗಿಯ ಎಎಸ್ಐ, ಜಿಡಿ ಮಹದೇವ್ ಪಿ.(50), ಉತ್ತರ ಪ್ರದೇಶದ ಅಲಿಗರ್ನ ಎಎಸ್ಐ, ಜಿಡಿ ಮದನ್ ಪಾಲ್ ಸಿಂಗ್(52) ಹಾಗೂ ಕೇರಳದ ಇಡುಕ್ಕಿಯ ಓ.ಪಿ.ಸಜು(47) ಹುತಾತ್ಮ ಯೋಧರು ಎಂದು ಗುರುತಿಸಲಾಗಿದೆ. ನಕ್ಸಲರು ದಾಳಿ ನಡೆಸಲು ಸಿದ್ದರಾಗಿರುವುದನ್ನು ಅರಿತ ಯೋಧರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದರೆ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರು ಯೋಧರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹದೇವ್ ಅವರು ಕಳೆದ 29ವರ್ಷದಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 2 ದಿನಗಳಲ್ಲಿ ಮಗಳ ಸೀಮಂತ ಕಾರ್ಯಕ್ಕೆ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು ಎನ್ನಲಾಗಿದೆ.