ನಟಿ ಶ್ರುತಿ ವಿರುದ್ಧ ದೂರು ದಾಖಲು…

59
firstsuddi

ಹಾವೇರಿ : ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ.6ರಂದು ಹಿರೇಕೆರೂರು ಕ್ಷೇತ್ರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ನಟಿ ಶ್ರುತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಜೆಡಿಎಸ್ ಆರೋಪ ಮಾಡಿತ್ತು. ಹಿರೇಕೆರೂರು ನೋಡಲ್ ಅಧಿಕಾರಿ ಪಂಪಾಪತಿ ಎಂಬವರು ನಟಿ ಶ್ರುತಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಇದೀಗ ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ, ಹಾಗೂ ಭಯ ಭೀತಿಯನ್ನುಂಟು ಮಾಡಿದ ಅಪರಾಧದ ಹಿನ್ನಲೆ ನಟಿ ಶ್ರುತಿ ವಿರುದ್ಧ ಕಲಂ 505(2)ರಡಿಯಲ್ಲಿ ಕೇಸ್ ದಾಖಲಾಗಿದೆ.

ಶೃತಿ ಹೇಳಿದ್ದೇನು? : ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶಕ್ಕೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪರ ಪ್ರಚಾರ ಮಾಡಲು ಶ್ರುತಿಯವರು ಆಗಮಿಸಿದ್ದರು. ಈ ವೇಳೆ ಭಾಷಣ ಮಾಡಿದ್ದ ಅವರು ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿ ಬಿಡುತ್ತೇನೆ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದ್ರೆ ಕಾಂಗ್ರೆಸ್ ಗೆ ಮತ ಹಾಕಿ. ನಿಮ್ಮ ವಂಶದ ಜೊತೆಗೆ ದೇಶದ ಅಭಿವೃದ್ಧಿ ಆಗಬೇಕಾದ್ರೆ ಬಿಜೆಪಿಗೆ ಮತ ಹಾಕಿ ಎಂದು ಹೇಳಿದ್ದರು. ಶ್ರುತಿ ಅವರ ಮಾತಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.