ಹಾವೇರಿ: ಇಲ್ಲಿನ ವರದಾ ನದಿಯಲ್ಲಿ ಈಜಲು ಹೋಗಿದ್ದ 17 ವರ್ಷದ ಹುಡುಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನ ಅಮೋಘ್ ಹೊಸಮನಿ (17) ಎಂದು ಗುರುತಿಸಲಾಗಿದೆ. ವಿಜಯದಶಮಿ ಹಬ್ಬದ ಹಿನ್ನೆಲೆ ಅಮೋಘ್ ಸ್ನೇಹಿತರೊಂದಿಗೆ ವರದಾ ನದಿಗೆ ಸ್ನಾನಕ್ಕೆ ಬಂದಿದ್ದ. ಈ ವೇಳೆ ನದಿ ಮಧ್ಯ ಭಾಗಕ್ಕೆ ಹೋಗಿದ್ದು, ಈಜು ಬಾರದೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಧಾವಿಸಿದ ಹಾವೇರಿ ಮತ್ತು ಸವಣೂರು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಹುಡುಗನ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆ. ಸದ್ಯ ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










