ನನಗೀಗ 82ವರ್ಷ, ದೇವರು ಶಕ್ತಿಕೊಟ್ಟರೆ ಇನ್ನೊಂದು ವಿಧಾನಸಭೆ, ಲೋಕಸಭೆ ಚುನಾವಣೆ ಮಾಡುತ್ತೇನೆ: ಬಿಎಸ್‍ವೈ.

40
firstsuddi

ಚಿತ್ರದುರ್ಗ: ನನಗೀಗ 82ವರ್ಷ, ದೇವರು ಶಕ್ತಿಕೊಟ್ಟರೆ ಇನ್ನೊಂದು ವಿಧಾನಸಭೆ, ಲೋಕಸಭೆ ಚುನಾವಣೆ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಜಿಲ್ಲೆಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಗೋವಿಂದ ಕಾರಜೋಳಗೆ ಗೆಲ್ಲಿಸಿದರೆ ನನಗೆ ಗೆಲ್ಲಿಸಿದಂತೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ, ಆದರೆ ಮೋದಿ ಎದುರು ಮತ್ತೊಂದು ಹೆಸರು ಹೇಳುವ ಧೈರ್ಯ ಇಲ್ಲ. ಹೀಗಾಗಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಇನ್ನು ಹಂಪಿ ಉತ್ಸವದಂತೆ ಮದಕರಿ ನಾಯಕ ಉತ್ಸವ ಮಾಡುವ ಭರವಸೆ ನೀಡಿದ ಅವರು, ‘ಭದ್ರಾ ಯೋಜನೆಗೆ 5.300ಕೋಟಿ ಈವತ್ತಲ್ಲ, ನಾಳೆ ಬರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದ ತಡವಾಗಿರಬಹುದು. ಮೋದಿ, ಅಮಿತ್ ಶಾ ಜೊತೆ ಮಾತಾಡಿ ಶೀಘ್ರ ಅನುದಾನ ತರುತ್ತೇವೆ ಎಂದರು. ಕಿಸಾನ್ ಸಮ್ಮಾನ್ ಯೋಜನೆ ಅಡಿ 4ಸಾವಿರ ರೂ.ಕೊಡುವುದನ್ನು ಸಿದ್ಧರಾಮಯ್ಯ ಸರ್ಕಾರ ನಿಲ್ಲಿಸಿದೆ. ಇದಷ್ಟೇ ಅಲ್ಲ, ದುಡ್ಡಿಲ್ಲದೆ ಕಾಂಗ್ರೆಸ್ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದನೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಿದೆ ಎಂದರು.