ನನಗೆ ಕಾನೂನಿನ ಮೇಲೆ ನಂಬಿಕೆ ಇದೆ, ಯಾವುದೇ ವಿಚಾರಣೆಯಾದರೂ ನಾನು ಧೈರ್ಯದಿಂದ ಎದುರಿಸುತ್ತೇನೆ : ಡಿ.ಕೆ. ಶಿವಕುಮಾರ್.

235
firstsuddi

ನವದೆಹಲಿ : ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಿನ್ನೆಯಿಂದ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಇನ್ನೊಂದು ಸಮ್ಮನ್ಸ್ ಜಾರಿ ಮಾಡಿದ್ದು, ಈ ವೇಳೆ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಯಾವುದೇ ವಿಚಾರಣೆಯಾದರೂ ನಾನು ಧೈರ್ಯದಿಂದ ಎದುರಿಸುತ್ತೇನೆ. ಹೆದರುವ ಪ್ರಶ್ನೆಯೇ ಇಲ್ಲ. ನಾನೇನೂ ತಪ್ಪು ಮಾಡಿಲ್ಲ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅಧಿಕಾರಿಗಳಿಗೆ ಕೂಡಾ ಸಹಕರಿಸುತ್ತೇನೆ. ವಿಚಾರಣೆಗೆ ಒಂದು ತಿಂಗಳು ಬನ್ನಿ ಎಂದು ಕರೆದರೂ ಬರುತ್ತೇನೆ. ನನಗೆ ಯಾವ ಭಯವೂ ಇಲ್ಲ ಎಂದು ಹೇಳಿದರು.