ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ : ರಾಕ್ ಲೈನ್ ವೆಂಕಟೇಶ್.

124
firstsuddi

ಬೆಂಗಳರು : ಮಂಡ್ಯದಲ್ಲಿ ನಡೆಯುತ್ತಿರುವ ಕೆ.ಆರ್.ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ಸಮರ ಇಂದು ಕೂಡ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಕ್ ಲೈನ್ ವೆಂಕಟೇಶ್ ಅವರು ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್ ನಲ್ಲಿ ಮಾತಾಡ್ತಿದ್ದರು. ಇವತ್ತು ಯಾವ್ ಟೋನ್ ನಲ್ಲಿ ಮಾತಾಡ್ತಿದ್ದೀರಾ. ಇದೆಲ್ಲ ಬೇಡ. ಸುಮಲತಾ ಅಡ್ಡ ಮಲಗಿಸಿದ್ರೆ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಅಂದೆ ಅಂತ ಹೇಳಿದ್ರಿ. ಚುನಾವಣೆ ಸಮಯದಲ್ಲಿ ಫೈಸ್ಟಾರ್ ಹೋಟೇಲ್ ನಲ್ಲಿ ಕುಳಿತು ನೀವು ಏನ್ ಮಾಡಿದ್ರಿ ಎಲ್ಲರಿಗೂ ಗೊತ್ತು. ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ವಾರ್ನಿಂಗ್ ಮಾಡಿದ್ದಾರೆ.

ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕುಮಾರಸ್ವಾಮಿ ಕಾಯಿಸಿದ್ದರು. ದೊಡ್ಡಣ್ಣ ಕೊಟ್ಟ ಮನವಿ ಪತ್ರವನ್ನು ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರಿ. ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅಧಿಕೃತ ಕೆಲಸ ಮಧು ನೋಡ್ತಾರೆ. ದೆಹಲಿಗೆ ಹೋದಾಗ ನಾನು, ದೊಡ್ಡಣ್ಣ, ಮಧು ಯಾರಾದ್ರು ಹೋಗ್ತೀವಿ ಸುಮಲತಾ ಟ್ರ್ಯಾಪ್ ಮಾಡೋಕೆ ಯಾರ್ ಯಾರ್ನ್ನ ಕಳಿಸಿದ್ರು ಅಂತ ನಮಗೆ ಗೊತ್ತಿದೆ. ಒಂದು ಸಂಸ್ಥೆಯಿಂದ ಒಬ್ಬ ವ್ಯಕ್ತಿಯನ್ನ ಸುಮಲತಾ ಆಫೀಸ್ಗೆ ಕಳಿಸ್ತಾರೆ. ಸುಮಲತಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್ ಮಾಡಿದ್ದರು. ಆದ್ರೆ ಸಂಸದರು ನಾವು ಮೀಟ್ ಆಗೊಲ್ಲ ಅಂದ್ರು. ನಂತರ ದೊಡ್ಡ ಸಂಸ್ಥೆ ಮಾತಾಡದೇ ಸರಿ ಹೋಗೊಲ್ಲ ಅಂತ ಮಧು ಮಾತಾಡಿದ್ರು. ಅವನು ಎಲ್ಲಾ ರೆಕಾರ್ಡ್ ಮಾಡುತ್ತಿದ್ದ. ಅವತ್ತು ನಾನು ವಿಡಿಯೋ, ಆಡಿಯೋ ಮಾಡಿದ್ದೇನೆ. ಇವರು ಯಾಕೆ ಆಡಿಯೋ ಬಿಡ್ತಿಲ್ಲ ಅಂದ್ರೆ ಕುಮಾರಸ್ವಾಮಿ ಹೆಸರು ಅದರಲ್ಲಿ ಇದೆ ಅದಕ್ಕೆ ಬಿಡ್ತಿಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ರಾಜಕೀಯದಿಂದ ನನಗೆ ಪರಿಚಯ ಅಲ್ಲ. ಸಿನಿಮಾದಿಂದ ಪರಿಚಯ. ಕುಮಾರಸ್ವಾಮಿ ಬೆಳೆದಿರೋದು ಸಂತೋಷ. ಚಿಕ್ಕ ಚಿತ್ರ ಮಂದಿರ ಇಟ್ಟುಕೊಂಡು ಬೆಳೆದಿದ್ದಾರೆ. ಅವರ ಚಾನಲ್ ಓಪನ್ ಮಾಡೋವಾಗ ಅವರ ಜೊತೆ ನಾನು ಇದ್ದೆ. ನಾನು ಯಾವುದೇ ಕೆಲಸಕ್ಕೆ ಅವ್ರಿಗೆ ಕೇಳಿಲ್ಲ. ರಾಜಕೀಯ ವಿಚಾರ ದಲ್ಲಿ ನಾನು ಏನು ಮಾತಾಡೊಲ್ಲ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಒಳ್ಳೆ ಕೆಲಸ ಮಾಡಿದ್ದೀರಿ, ಹೆಸರು ಕೆಡಿಸಿಕೊಳ್ಳಬೇಡಿ ಎಂದರು.